ಕೇಂದ್ರ ಕಾರ್ಯಾಗಾರವನ್ನು 1959ರ ಆಗಸ್ಟ್ 15 ರಂದು ಸ್ಥಾಪಿಸಲಾಯಿತು. ಇದು ಒಂದು ಉಪಕರಣಗಳ ಕಾರ್ಯಾಗಾರವಾಗಿದ್ದು, ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಜ್ಞಾನ ವಿಭಾಗಗಳಿಗೆ ವೈಜ್ಞಾನಿಕ ಉಪಕರಣಗಳ ತಯಾರಿ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತದೆ. ಸಂಶೋಧಕರ ಅವಶ್ಯಕತೆಯಂತೆ ಉಪಕರಣಗಳ ವಿನ್ಯಾಸದ ನಂತರ ತಯಾರಿಕೆ ನಡೆಯುತ್ತದೆ. ತಯಾರಿಸಲಾದ ಉಪಕರಣಗಳನ್ನು ಸಂಬಂಧಿತ ವಿಭಾಗಗಳಿಗೆ ನೀಡಲಾಗುತ್ತದೆ. ಪ್ರಯೋಗಗಳ ವೇಳೆ ಯಾವುದೇ ಬದಲಾವಣೆ ಅಗತ್ಯವಿದ್ದರೆ, ಈ ಕಾರ್ಯಾಗಾರವೇ ಅದನ್ನು ಮಾಡುತ್ತದೆ. ಜೊತೆಗೆ, ವಿವಿಧ ಉಪಕರಣಗಳ ದುರಸ್ತಿ ಕಾರ್ಯಗಳೂ ನಡೆಯುತ್ತವೆ. ಇಲ್ಲಿ ನಿಖರ ಯಂತ್ರೋಪಕರಣಗಳು ಲಭ್ಯವಿವೆ.
ಈ ಕಾರ್ಯಾಗಾರದಲ್ಲಿ ಕೆಳಕಂಡ ವಿಭಾಗಗಳಿವೆ:
ಮೇಲ್ಕಂಡ ವಿಭಾಗಗಳಲ್ಲಿ ಸಂಶೋಧನಾ ಉಪಕರಣಗಳ ತಯಾರಿ ಹಾಗೂ ನಿಖರವಾದ ಸುಸಜ್ಜಿತ ಉಪಕರಣಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತದೆ. ಉಪಕರಣಗಳ ತಯಾರಿಕೆಯ ಜೊತೆಗೆ, ಕಂಪೆರೇಟರ್‌ಗಳು, ವ್ಯಾಕ್ಯೂಮ್ ಪಂಪ್‌ಗಳು ಮತ್ತು ವಿವಿಧ ರೀತಿಯ ಗ್ಲಾಸ್ ಉಪಕರಣಗಳ ದುರಸ್ತಿ ಕಾರ್ಯವೂ ನಡೆಯುತ್ತದೆ.
ವಿವಿಧ ವಿಜ್ಞಾನ ವಿಭಾಗಗಳಿಗೆ ಸೇವೆ ನೀಡುವುದರ ಜೊತೆಗೆ, ಈ ಕಾರ್ಯಾಗಾರವು ಎಂಜಿನಿಯರಿಂಗ್ ವಿಭಾಗ, ಮುದ್ರಣಾಲಯ, ಉದ್ಯಾನವನ, ಗ್ರಂಥಾಲಯ ಮತ್ತು ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನ ವಿಜ್ಞಾನ ವಿಭಾಗಗಳಿಗೂ ಸೇವೆ ವಿಸ್ತರಿಸಿದೆ. ಈ ಕಾರ್ಯಾಗಾರವು ಮುಖ್ಯ ಕಟ್ಟಡದ ಗಡಿಯಾರ ಹಾಗೂ ಲಿಫ್ಟ್ ಹಾಗೂ ವಿಶ್ವವಿದ್ಯಾನಿಲಯದ ವಾಹನಗಳ ನಿರ್ವಹಣೆಯನ್ನೂ ಮಾಡುತ್ತದೆ.
2022. Karnatak University Dharwad. All Rights Reserved | Designed & Developed By : SmarTec IT Solutions