ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ


ದೃಷ್ಟಿ

ವಿಶ್ವವಿದ್ಯಾಲಯವು ತನ್ನ ಉತ್ಪನ್ನಕಾರಕ ವೈಜ್ಞಾನಿಕ ಸಂಶೋಧನೆ, ಮಾನವ ಹಿತಸಾಧನೆಯ ದೃಷ್ಟಿ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಾಧನೋಪಾಯಗಳನ್ನು ಸಮತೋಲನದಿಂದ ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಮತ್ತು ಸಮಗ್ರೀಕರಿಸುವ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯ ದೇಗುಲವಾಗುವ ಅಲ್ಲದೇ, ಜ್ಞಾನಾಧರಿತ ನಾಗರಿಕ ಸಮಾಜವನ್ನು ಸದೃಢಗೊಳಿಸುವ ಗುರಿಯನ್ನು ಹೊಂದಿದೆ.



ಧ್ಯೇಯ

ರಾಷ್ಟ್ರದ ಮತ್ತು ಉದ್ಯಮರಂಗದ ಪ್ರಚಲಿತ ಅಗತ್ಯಗಳನ್ನು ಪ್ರತಿಫಲಿಸುವ ಹೊಸ ಪೀಳಿಗೆಯ ಬಹುಶಾಸ್ತ್ರೀಯ ಪಠ್ಯಕ್ರಮಗಳನ್ನು ರೂಪಿಸುವುದು. ಸಂಪೂರ್ಣ ಕಂಪ್ಯೂಟರೀಕರಣ ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರ್ಜಾಲ ನಿರ್ಮಾಣ ಅಳವಡಿಸುವ ಮೂಲಕ ಅಂತರ್ಜಾಲ ತಾಣಗಳಿಂದ ಮತ್ತು ಸಂಗ್ರಹಣೆಗೆ ಡಿಜಿಟಲ್‌ ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಉತ್ತೇಜಿಸುವುದು; ಆಯ್ದ ವಿಭಾಗಗಳಲ್ಲಿ ಅನ್‌ಲೈನ್‌ ಅಭ್ಯಾಸಕ್ರಮ ಸಹಿತವಾಗಿ ಆನ್‌ಲೈನ್‌ ಪರೀಕ್ಷೆಗಳ ವಿಧಾನವನ್ನು ಪರಿಚಯಿಸಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆಗೆ ತರುವುದ; ವಿಭಾಗಾತೀತವಾಗಿ ಸೋದರ ಅಧ್ಯಯನ ವಿಭಾಗಗಳತ್ತ ಸ್ನಾತಕೋತ್ತರ ವಿದ್ಯಾರ್ಥಿಗಳ ಚಲನೆಗೆ ಅವಕಾಶ ಕಲ್ಪಿಸಲು ಆಯ್ಕೆ ಆಧರಿತ ಕ್ರೆಡಿಟ್‌ ಪದ್ಧತಿಯನ್ನು ಪರಿಚಯಸುವುದು: ಎಲ್ಲ ಪದವಿ ಪಠ್ಯಕ್ರಮಗಳನ್ನು ಷಾಣ್ಮಾಸಿಕಗೊಳಿಸುವ ಮೂಲಕ ಪ್ರಯಾಣ ಬದ್ಧ ಅಭ್ಯಾಸ ಪತ್ರಿಕೆಯ ವ್ಯವಸ್ಥೆಯನ್ನು ಬಳಸಿ ಎಲ್ಲ ಮಹಾವಿದ್ಯಾಲಯಗಳಲ್ಲಿ ಸಮಾನ ಗುಣಮಟ್ಟದ ಉನ್ನತ ಶಿಕ್ಷಣವನ್ನು ಖಚಿತಗೊಳಿಸುವುದು; ಪರೀಕ್ಷೆಗಳ ಭಾಗದ ಮೌಲ್ಯಮಾಪನವನ್ನು ಮಹಾವಿದ್ಯಾಲಯಗಳ ಶಿಕ್ಷಕರಿಂದ ಮಾಡಿಸುವ ಮೂಲಕ ಈ ಪಠ್ಯಕ್ರಮಗಳ ಉದ್ದೇಶ ಈಡೇರಿಕೆಯಲ್ಲಿ ಹೆಚ್ಚಿನ ಉತ್ತರದಾಯಿತ್ವವನ್ನು ತರುವುದು; ಸ್ವಾಯತ್ತ ಪಠ್ಯ ವಿಷಯ ಮತ್ತು ಸ್ವಾಯತ್ತ ಮಹಾವಿದ್ಯಾಲಯಗಳಲ್ಲಿ ಹೆಚ್ಚಿನ ಉತ್ತೇಜನ ಒದಗಿಸುವ ಮೂಲಕ ಸ್ಪರ್ಧಾತ್ಮಕತೆ, ಸುಲಭ ನಿರ್ವಹಣೆ ಪಠ್ಯಕ್ರಮಗಳ ಕಾಲೋಚಿತ ಪರಿಷ್ಕರಣೆಯನ್ನು ಪ್ರೋತ್ಸಾಹಿಸುವುದು.

2022. Karnatak University Dharwad. All Rights Reserved | Designed & Developed By : SmarTec IT Solutions