Sl. No. | ಹೆಸರು | ಹುದ್ದೆ |
---|---|---|
1. | ಶ್ರೀ ಜಿ.ಎಮ್. ಕುಂಬಾರ ತನಿಕಾಧಿಕಾರಿ |
ತನಿಕಾಧಿಕಾರಿ |
2. | ಪ್ರೊ. ಜಿ. ಎಸ್. ವೇಣುಮಾಧವ ಅಪರಾಧ ಮತ್ತು ವಿಧಿವಿಜ್ಞಾನ ವಿಭಾಗ, ಕವಿವಿ, ಧಾರವಾಡ |
ಅಧ್ಯಕ್ಷರು |
3. | ಪ್ರೊ. ಎ.ಎನ್. ತಾಮ್ರಗುಂಡಿ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ |
ಸದಸ್ಯರು |
4. | ಪ್ರೊ. ಎಂ. ಡೇವಿಡ್ ನಿರ್ದೇಶಕರು ಯೋಜನಾ, ಮೇಲ್ವಿಚಾರಣಾ ಮತ್ತು ಮೌಲ್ಯಮಾಪನ ಮಂಡಳಿ |
ಸದಸ್ಯರು |
5. | ಕುಮಾರಿ. ಅಮೃತಾ ತಳವಾರ | ವಿದ್ಯಾರ್ಥಿ ಪ್ರತಿನಿಧಿ |
6. | ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ವಿಭಾಗ | ಸಂಯೋಜಕರು |
ವಿದ್ಯಾರ್ಥಿಗಳಿಗೆ ಶಿಕ್ಷಣ: ರ‍್ಯಾಗಿಂಗ್ ನ ವ್ಯಾಕ್ಯಾನ, ಇದರಿಂದ ವೈಯಕ್ತಿಕವಾಗಿ ಶೈಕ್ಷಣಿಕ ಪರಿಸರದ ಮೇಲಾಗುವ ಋಣಾತ್ಮಕ ಪ್ರಭಾವಗಳು ಮತ್ತು ರ‍್ಯಾಗಿಂಗ್ ನಲ್ಲಿ ಭಾಗಿಯಾಗುವುದರಿಂದ ಎದುರಿಸಬೇಕಾದ ಕಾನೂನಾತ್ಮಕ ಸನ್ನಿವೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವಲ್ಲಿ ಸಮಿತಿಯು ಮಹತ್ತರ ಪಾತ್ರವನ್ನು ವಹಿಸುತ್ತದೆ.
ಸದರಿ ಕೋಶವು ಪರಸ್ಪರ ಗೌರವದ ಸಂಸ್ಕೃತಿ ಮತ್ತು ಒಳಗೂಡಿಕೆ ಮೂಲಕ ಶೈಕ್ಷಣಿಕ ಸ್ನೇಹಿ ಪರಿಸರವನ್ನು ನಿರ್ಮಿಸುವ ದಿಶೆಯಲ್ಲಿ ಹಲವಾರು ಕಾರ್ಯಗಾರಗಳು, ಚರ್ಚೆ, ಉಪನ್ಯಾಸಗಳನ್ನು ಆಯೋಜಿಸುತ್ತದೆ.
ಸದರಿ ಕೋಶವು ಆ್ಯಂಟಿ-ರ‍್ಯಾಗಿಂಗ ಕುರಿತಾದ ನಿಯಮ ಮತ್ತು ಸಮಿತಿ ಸದಸ್ಯರ ಸಂಪರ್ಕದ ಮಾಹಿತಿಯನ್ನು ಒದಗಿಸಿ, ಆ್ಯಂಟಿ-ರ‍್ಯಾಗಿಂಗ ಕುರಿತಾದ ದೂರುಗಳು ಬಂದಲ್ಲಿ ಪರಿಶೀಲಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ.
ಕೋಶವು ವಿದ್ಯಾರ್ಥಿಗಳಿಗೆ ರ‍್ಯಾಗಿಂಗ ಪ್ರಕರಣಗಳನ್ನು ವರದಿ ಮಾಡಲು ಸ್ಪಷ್ಟ ಕ್ರಮಗಳನ್ನು ರಚಿಸಿದ್ದು ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಟ್ಟು ನಿರ್ದಿಷ್ಠ ಸಮಯದಲ್ಲಿ ಪರಿಹಾರವನ್ನು ನೀಡುವುದು.
Tಸಮಿತಿಯು ದಾಖಲಾದ ದೂರಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರತ್ಯಕ್ಷ ಸಾಕ್ಷಿಗಳನ್ನು ವಿಚಾರಿಸುವ ಮೂಲಕ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲಾಗುವುದು.
ಅಪರಾಧಿಗಳ ವಿರುದ್ದ ಸಾಂಸ್ಥಾನಿಕ ಆ್ಯಂಟಿ-ರ‍್ಯಾಗಿಂಗ ನಿಯಮದಲ್ಲಿ ಗುರುತಿಸಲಾದ ಶಿಸ್ತುಬದ್ಧ ಕ್ರಮಗಳನ್ನು ಜರುಗಿಸುವುದು ಸಮಿತಿಯು ಅಪರಾಧಿಗಳಿಗೆ ಅಪರಾಧದ ಗಾಂಭೀರ್ಯತೆ ಆಧಾರದ ಮೇಲೆ ಎಚ್ಚರಿಕೆಯಿಂದ ಉಚ್ಛಾಟನೆಯವರೆಗೂ ಶಿಕ್ಷಿಸುವ ಅಧಿಕಾರವಿರುತ್ತದೆ.
ಅಪರಾಧದ ಸ್ವರೂಪ ಬಹಳ ಗಂಭೀರವಾಗಿದಲ್ಲಿ ಸಮಿತಿಯು ಪೊಲೀಸ್‌ರಿಗೆ ಅಥವಾ ಸಂಬಧಿತ ಅಧಿಕಾರಿಗಳಿಗೆ ಸೂಚಿಸುತ್ತಾರೆ.
The ಸಮಿತಿಯು ಆ್ಯಂಟಿ-ರ‍್ಯಾಗಿಂಗ ನಿಗ್ರಹ ದಳದ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಆವರಣ ಮತ್ತು ಸಂಭಾವ್ಯ ಅಪರಾಧ ಪ್ರದೇಶಗಳಲ್ಲಿ ರ‍್ಯಾಗಿಂಗ ತಡೆಗಟ್ಟಲು ಸದಾ ಜಾಗೃತ ಕಣ್ಣುಗಳನ್ನು ಇಟ್ಟಿರುತ್ತದೆ.
ರ‍್ಯಾಗಿಂಗ ನಡೆಯಬಹುದಾದಂತಹ ವಸತಿನಿಲಯಗಳಂತಹ ಸ್ಥಳಗಳಿಗೆ ಸಮಿತಿಯು ಆಕಸ್ಮಿಕ ದಾಳಿ ನಡೆಸುವುದು.
ವಿಶ್ವವಿದ್ಯಾಲಯದ ಆವರಣ ಮತ್ತು ಹೊರಗೆ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಗಮನಿಸಿ ರ‍್ಯಾಗಿಂಗ ನಲ್ಲಿ ಭಾಗವಹಿಸಬಹುದಂತಹ ಪ್ರಕರಣಗಳನ್ನು ಗುರುತಿಸುವುದು. ವಿಶ್ವವಿದ್ಯಾಲಯದಲ್ಲಿ ಘನಾತ್ಮಕ ಪರಿಸರವನ್ನು ನಿರ್ಮಿಸುವುದು.
ಸಮಿತಿಯು ವಿದ್ಯಾರ್ಥಿಗಳ ಸುರಕ್ಷಿತ ಮತ್ತು ಮೌಲ್ಯಾದಿತ ಸ್ಥಾನವನ್ನು ಹೊಂದಲು ಗೌರವಯುತ ಸಂಸ್ಕೃತಿ ಮತ್ತು ಒಳಗೂಡಿಕೆಯನ್ನು ಹೊಂದಲು ಕಾರ್ಯನಿರ್ವಹಿಸುತ್ತದೆ.
ರ‍್ಯಾಗಿಂಗ ಪೀಡಿತವಾದ ವಿದ್ಯಾರ್ಥಿಗಳಿಗೆ ಸಮಾಲೋಚನೆ ಮತ್ತು ಕಾನೂನು ನೆರವಿನಂತಹ ಬೆಂಬಲ ಸೇವೆಗಳನ್ನು ಒದಗಿಸುವುದು.
ರ‍್ಯಾಗಿಂಗ ವಿಷಯವಾಗಿ ದಾಖಲಾದ ಎಲ್ಲ ದೂರುಗಳನ್ನು ಅವಿಳಂಭವಾಗಿ ಮತ್ತು ಪ್ರಮಾಣಿಕವಾಗಿ ಪರಿಹರಿಸಲು ಸಮಿತಿಯು ಹೊಣೆಗಾರಿಕೆ ಮತ್ತು ನ್ಯಾಯಬದ್ಧತೆಯನ್ನು ಹೊಂದಿರುತ್ತದೆ.
2022. Karnatak University Dharwad. All Rights Reserved | Designed & Developed By : SmarTec IT Solutions