ವಿದ್ಯಾರ್ಥಿ ಕಲ್ಯಾಣ ವಿಭಾಗ



ಸ್ಥಾಪನೆ ಮತ್ತು ಸಂಕ್ಷಿಪ್ತ ಇತಿಹಾಸ
  1. ವಿದ್ಯಾರ್ಥಿ ಕಲ್ಯಾಣ ವಿಭಾಗವನ್ನು 1974ರಲ್ಲಿ ಸ್ಥಾಪಿಸಲಾಯಿತು.
  2. ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರ ಹುದ್ದೆಯು ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ 2000 ರ ಅಡಿಯಲ್ಲಿ ಕಾನೂನುಬದ್ಧ ಹುದ್ದೆಯಾಗಿರುತ್ತದೆ. ಗೌರವಾನ್ವಿತ ರಾಜ್ಯಪಾಲರು ನಿರ್ದಿಷ್ಟ ಅವಧಿಗೆ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಕ ಮಾಡುತ್ತಾರೆ. ನಿರ್ದೇಶಕರು ಶೈಕ್ಷಣಿಕ ಮಂಡಳಿಯ ಸದಸ್ಯರಾಗಿರುತ್ತಾರೆ.
  3. ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸುವುದು, ಜಾರಿಗೆ ತರುವುದು ಮತ್ತು ಮೇಲ್ವಿಚಾರಣೆ ಮಾಡುವುದಾಗಿ ಕಾರ್ಯನಿರ್ವಹಿಸುತ್ತಾರೆ.
  4. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗವು ವಿದ್ಯಾರ್ಥಿಗಳು, ಆಡಳಿತ ಇಲಾಖೆ, ಶಿಕ್ಷಕರು ಮತ್ತು ಅಶೈಕ್ಷಣಿಕ ಸಿಬ್ಬಂದಿಗೆ ಮಧ್ಯಸ್ಥಿಕೆಯಿಂದ ಕಾರ್ಯನಿರ್ವಹಿಸುತ್ತದೆ.
  5. ಪ್ರತಿ ವರ್ಷ ಸಾಹಿತ್ಯ, ಕ್ರೀಡೆ ಮತ್ತು ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಿರ್ದೇಶನಾಲಯವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯೋಜಿಸುತ್ತದೆ.
  6. ಈ ನಿರ್ದೇಶನಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ವಿದ್ಯಾರ್ಥಿ ಕೇಂದ್ರಿತ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ.
  7. ಈ ನಿರ್ದೇಶನಾಲಯದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  8. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಕರ್ನಾಟಕ ವಿಶ್ವವಿದ್ಯಾಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ಸಹಯೋಗದಲ್ಲಿ ಮಾರ್ಗದರ್ಶನ ಮತ್ತು ಸಮಾಲೋಚನಾ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.
<
ದೃಷ್ಟಿಕೋನ ಮತ್ತು ಧ್ಯೇಯ

ದೃಷ್ಟಿಕೋನ (Vision)

ವಿದ್ಯಾರ್ಥಿಗಳಲ್ಲಿ ಪಾಠ್ಯ ಮತ್ತು ಪಾಠ್ಯೇತರ ಚಟುವಟಿಕೆಗಳ ಜ್ಞಾನದ ಮೂಲಕ ಶೈಕ್ಷಣಿಕ ಉತ್ಕೃಷ್ಟತೆ, ಶಿಸ್ತಿನ ಜೀವನ ಮತ್ತು ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವ ಸಾಮರ್ಥ್ಯವನ್ನು ನಿರ್ಮಿಸುವುದು.

ಧ್ಯೇಯ (Mission)

ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮೌಲ್ಯಾಧಾರಿತ ನೈತಿಕತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವದು, ಹೊಸ ಹಾಗೂ ಉಪಯುಕ್ತ ಜ್ಞಾನವನ್ನು ಅರಿಯಲು ಅಧ್ಯಯನ ಮನೋಭಾವ ಮತ್ತು ಕುತೂಹಲವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸುವದು, ಶಿಸ್ತು ಹಾಗೂ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸುವದು. ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ವ್ಯತ್ಯಾಸಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಶಾಂತಿಯುತವಾಗಿ ಬದುಕಲು ಮತ್ತು ಸಮರಸ್ಯದಿಂದ ಕೆಲಸ ಮಾಡಲು ಸೌಲಭ್ಯ ಕಲ್ಪಿಸುವದು.

ವಸತಿ ನಿಲಯಗಳಲ್ಲಿನ ಸೌಲಭ್ಯಗಳು
  1. ಎಲ್ಲಾ ವಸತಿ ನಿಲಯಗಳಲ್ಲಿ ಸಾಕಷ್ಟು ಕೊಠಡಿಗಳೊಂದಿಗೆ ಆರಾಮದಾಯಕ ವಾಸತಿ ಸೌಲಭ್ಯ ಇದೆ. ಪ್ರತಿ ಕೊಠಡಿಯಲ್ಲಿ ಎರಡು ಬಂಕರ್ ಹಾಸಿಗೆಗಳು, ಸ್ಟೀಲ್ ಕುರ್ಚಿಗಳು ಮತ್ತು ಪುಸ್ತಕಗಳು ಹಾಗೂ ಓದಿನ ಸಾಮಗ್ರಿಗಳನ್ನು ಇಡಲು ವಿಸ್ತೃತವಾದ ಎರಡು ಓದು ಮೇಜುಗಳು ಇರುತ್ತವೆ. ಎಲ್ಲಾ ವಸತಿ ನಿಲಯಗಳಲ್ಲಿ ಸೌರಶಕ್ತಿಯ ಬಿಸಿ ನೀರಿನ ವ್ಯವಸ್ಥೆಯೂ ಇದೆ.
  2. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುದ್ದಿಪತ್ರಿಕೆ ವ್ಯವಸ್ಥೆ, ಭದ್ರತೆ, ಸಿಸಿಟಿವಿ ಕ್ಯಾಮೆರಾ, ಕುಡಿಯುವ ನೀರಿಗಾಗಿ ಆರ್.ಒ. ಸಿಸ್ಟಮ್‌ಗಳು, ಯೋಗ ತರಬೇತಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದೆ.
  3. ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡೆ ಮತ್ತು ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ಮಲ್ಟಿ ಜಿಮ್ ಸೌಲಭ್ಯವಿದೆ ಮತ್ತು ಟೆನಿಸ್, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳಿಗೆ 24x7 ಆರೋಗ್ಯ ಸೇವೆಗಳನ್ನು ಸಹ ಒದಗಿಸಲಾಗಿದೆ.
  4. ವಸತಿ ನಿಲಯದಲ್ಲಿ ಸೇರ್ಪಡೆಗೊಂಡ ದಿವ್ಯಾಂಗ ವಿದ್ಯಾರ್ಥಿಗೆ ಮೂರು ಚಕ್ರಗಳ ಕುರ್ಚಿಯ ಸೌಲಭ್ಯ ಒದಗಿಸಲಾಗುತ್ತದೆ.
ವಿದ್ಯಾರ್ಥಿ ಕಲ್ಯಾಣ ಸೇವೆಗಳು / ಯೋಜನೆಗಳು

ಎಲ್ಲಾ ಅಡಕ ಹಾಗೂ ಅಂಗಸಂಸ್ಥೆಗಳ ಕಾಲೇಜುಗಳು ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ನಾವು ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ನೀಡುತ್ತೇವೆ:

  1. ಅಪಘಾತದಿಂದ ಉಂಟಾಗುವ ಮರಣಕ್ಕೆ ರೂ.25,000=00.
  2. ಶಾಶ್ವತ ಸಂಪೂರ್ಣ ಅಂಗವಿಕಲತೆಗೆ ರೂ.22,000=00.
  3. ಶಾಶ್ವತ ಭಾಗಶಃ ಅಂಗವಿಕಲತೆಗೆ ರೂ.12,000=00.
  4. ಅಪಘಾತ/ಅಂಗವಿಕಲತೆಯಿಂದ ಉಂಟಾಗುವ ವೈದ್ಯಕೀಯ ವೆಚ್ಚಕ್ಕೆ ರೂ.1,500=00.
  5. ಮೃತದೇಹವನ್ನು ಸ್ಥಳಾಂತರಿಸಲು (ಅಪಘಾತದ ಸಂದರ್ಭದಲ್ಲಿ ಮಾತ್ರ) ರೂ.1,000=00 ವೆಚ್ಚ.

ವೈದ್ಯಕೀಯ ವೆಚ್ಚಗಳ ಪರಿ-ಪಾವತಿ

ಬಡ ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಪಕುಲಪತಿಗಳಿಂದ ನೇಮಕಗೊಂಡ ವಿಶೇಷ ಸಮಿತಿಯು ಅರ್ಜಿದಾರರ ಅರ್ಹತೆ ಆಧಾರದ ಮೇಲೆ ಹಣಕಾಸಿನ ಸಹಾಯಧನದ ಪ್ರಮಾಣವನ್ನು ನಿರ್ಧರಿಸುತ್ತದೆ.

2022. Karnatak University Dharwad. All Rights Reserved | Designed & Developed By : SmarTec IT Solutions